Category Archives: ಬಾಲ್ಯವೆನ್ನೋ ಮಾಯೆ

ಯುಗಾದಿ : ಅಂದು-ಇಂದು

ಯುಗಾದಿ – ಚೈತ್ರ ಮಾಸದ ಮೊದಲ ದಿನ . ಹಿಂದೂಗಳಿಗೆ ಹೊಸ ವರುಷದ ಹರುಷ. ಜ್ಯೋತಿಷ್ಯ ಶಾಸ್ತ್ರದ  ಪ್ರಕಾರ ಇಂದು ಅಶ್ವಿನಿ ನಕ್ಷತ್ರಕ್ಕೆ ಸೂರ್ಯ ಪ್ರವೇಶಿಸಿದಾಗ ಭೂಮಿಯ ಮೇಲಿನ ಗಿಡ ಮರಗಳು ಚಿಗುರೊಡೆಯಲಾರಂಭಿಸುತ್ತವೆ. ಹಾಗಾಗಿ ಈ ದಿನವನ್ನು ವರ್ಷಾರಂಭ ಎಂದು ಆಚರಿಸುತ್ತಾರೆ. ಇವೆಲ್ಲ ಮಾಹಿತಿಗಳು , ಯುಗಾದಿಯ ಹಿನ್ನೆಲೆಗಳೆಲ್ಲ ಇತ್ತೀಚೆಗಷ್ಟೇ ತಿಳಿದು ಬಂದದ್ದು. ಬಾಲ್ಯದಲ್ಲಿ ನಮಗೆ … Continue reading

Posted in ಬದುಕಿನ ಬಂಡಿ, ಬಾಲ್ಯವೆನ್ನೋ ಮಾಯೆ | Leave a comment

ವಾರ್ಷಿಕ ಪ್ರವಾಸ

ನಮ್ಮ ಶಾಲಾ ದಿನಗಳ ನೆನಪಿನ ಪುಸ್ತಕದಲ್ಲಿ ವಾರ್ಷಿಕ ಪ್ರವಾಸವೂ (Annual Trip)  ಒಂದು. ವರ್ಷದ ಮಧ್ಯದಲ್ಲಿ ಬರುವ ಆ ಎರಡು ಮೂರು ದಿನಗಳಿಗೆ ವರ್ಷವಿಡೀ ಕಾದು ಹಣ್ಣಾದದ್ದು ಇನ್ನೂ ನೆನಪಿದೆ. ಅಜ್ಜಿ ತಾತರಿಂದ ಹಿಡಿದು ಮನೆಯವರನ್ನೆಲ್ಲ ಒಪ್ಪಿಸುತ್ತಿದ್ದದ್ದು ಮಹಾ ಸಾಧನೆಯೇ ಸರಿ. ಅಷ್ಟೆಲ್ಲ ಸಾಲದೇ ಗೆಳೆಯರ ಮನೆಯವರನ್ನೂ ಒಪ್ಪಿಸಿ ಅವರ ಅನಾವಶ್ಯಕ ಜವಾಬ್ದಾರಿ ಬೇರೆ, ಬೆನ್ನ … Continue reading

Posted in ಬಾಲ್ಯವೆನ್ನೋ ಮಾಯೆ | Leave a comment

ಹರಿದ ಪುಟಗಳ ಮರೆಯದ ಸಾಲುಗಳು

ನೆನಪಿದ್ಯಾ..ಶಾಲೆಯಲ್ಲಿ ಸ್ಕೂಲ್ ಡೇ!?! (ನಾವು ಓದೋವಾಗ ಸ್ಕೂಲ್ DAY ನಡೀತಾಯಿದ್ದದ್ದು ರಾತ್ರಿ ವೇಳೆ ) ನಮ್ಮದೇನಾದರೂ ಡ್ಯಾನ್ಸೋ, ನಾಟಕಾನೋ ಇದ್ದು ಅದಕ್ಕೆ ವೇಷ ಹಾಕ್ಕೊತಾ ಇರೋವಾಗ ಬಹುಮಾನ ವಿತರಣೆ ಆಗ್ತಿರುತ್ತೆ ಸ್ಟೇಜಲ್ಲಿ…ನಮ್ಮ ಸರದಿ ಬಂದಾಗ ಯಾವ ವೇಷದಲ್ಲಿ ಇರ್ತೀವೋ ಹಂಗಂಗೇ ಸಭೆ ಮೇಲೆ ಹೋಗಿ ಬಹುಮಾನ ತಗೋಳೋದು… ಸಭಿಕರಾಗಿ ಕುಳಿತ ಮನೆಯವರು,ಪಕ್ಕದ ಮನೆಯವರು, ಕ್ಲಾಸ್ ಮೇಟಿನ … Continue reading

Posted in ಬಾಲ್ಯವೆನ್ನೋ ಮಾಯೆ | 2 Comments