Category Archives: ಬದುಕಿನ ಬಂಡಿ

ಯಾಕಿನ್ನು ಅಪ್ಡೇಟ್ ಆಗಿಲ್ಲ?!!!

Note: Purely Sarcastic!!!   ವಾರಾಂತ್ಯದಲ್ಲಿ ಬೇಜಾರು ಕಳೆಯೋದಕ್ಕೆ ಈ ಊರಲ್ಲಿರೋದು ಮೂರು ಮಾಲ್ ಗಳು ಬಿಟ್ರೆ, ಪ್ರಶಾಂತವಾದ ಸಮುದ್ರ. ಜೊತೆಗೆ ಯಾರಾದ್ರೂ ಬರ್ತಾರ ಅಂತ ನಮ್ಮ ಕನ್ನಡದವನೇ ಆದ ಸಹೋದ್ಯೋಗಿಯೊಬ್ಬನ ಕೇಳಿದ್ರೆ ಫೋನು ಲಾಪ್ಟಾಪ್ ಬಿಟ್ಟು ಎದ್ದೇಳಂಗ್ ಕಾಣ್ಲಿಲ್ಲ ಆಸಾಮಿ. “Game of Thrones season 7 ಶುರುವಾಗಿದೆ, ನೋಡೋದ್ ಬಿಟ್ಟು ನೀನೇನು ಗುರು … Continue reading

Posted in ಬದುಕಿನ ಬಂಡಿ, ಸಾಮಾಜಿಕ ಪಿಡುಗು | Leave a comment

ಕಣ್ಣ ಭಾಷೆ!

ಅತೀ ಒರಟರಲ್ಲಿ ಒರಟರಿರೋ ಜನಗಳ ಪೈಕಿ ನಮ್ಮ ಹಳ್ಳಿಯೂ ಒಂದು. ಏಕೆಂದರೆ ಅಲ್ಲಿ ‘ಥ್ಯಾಂಕ್ಯೂ (Thank-you)’ ಅಂತೆಲ್ಲಾ ಪದಗಳ ಬಳಸದೇ ದಿನವನ್ನೇಕೆ ವರ್ಷಗಳನ್ನೇ ಕಳೆಯಬಹುದು. ನಮ್ಮ ಊರು ದೇಶಗಳಲ್ಲೇ ಪರದೇಶಿಗಳಾದ ನನ್ನಂತಹವರು ಕಲಿತ ಯಾವುದೋ ಒಂದಿಷ್ಟು ಇಂಗ್ಲೀಷ್ ಪದಗಳನ್ನು ಹೊತ್ತು ತಂದು ಸಾಕಿಕೊಂಡಿದ್ದರೂ, ‘ಥ್ಯಾಂಕ್ಯೂ’ ಎಂದಾಗಲೆಲ್ಲ ಹೆಚ್ಚು ಎಂದರೆ ‘ನೋ ಮೆನ್ಷನ್’ ಅನ್ನೋದು ನಮ್ಮ ಬಾಯಲ್ಲಿ … Continue reading

Posted in ಬದುಕಿನ ಬಂಡಿ | Leave a comment

ಯುಗಾದಿ : ಅಂದು-ಇಂದು

ಯುಗಾದಿ – ಚೈತ್ರ ಮಾಸದ ಮೊದಲ ದಿನ . ಹಿಂದೂಗಳಿಗೆ ಹೊಸ ವರುಷದ ಹರುಷ. ಜ್ಯೋತಿಷ್ಯ ಶಾಸ್ತ್ರದ  ಪ್ರಕಾರ ಇಂದು ಅಶ್ವಿನಿ ನಕ್ಷತ್ರಕ್ಕೆ ಸೂರ್ಯ ಪ್ರವೇಶಿಸಿದಾಗ ಭೂಮಿಯ ಮೇಲಿನ ಗಿಡ ಮರಗಳು ಚಿಗುರೊಡೆಯಲಾರಂಭಿಸುತ್ತವೆ. ಹಾಗಾಗಿ ಈ ದಿನವನ್ನು ವರ್ಷಾರಂಭ ಎಂದು ಆಚರಿಸುತ್ತಾರೆ. ಇವೆಲ್ಲ ಮಾಹಿತಿಗಳು , ಯುಗಾದಿಯ ಹಿನ್ನೆಲೆಗಳೆಲ್ಲ ಇತ್ತೀಚೆಗಷ್ಟೇ ತಿಳಿದು ಬಂದದ್ದು. ಬಾಲ್ಯದಲ್ಲಿ ನಮಗೆ … Continue reading

Posted in ಬದುಕಿನ ಬಂಡಿ, ಬಾಲ್ಯವೆನ್ನೋ ಮಾಯೆ | Leave a comment

ಬಿಡಿಎ ಎಂಬ ರಕ್ಕಸ!

“ಅಲ್ಲಾ, ನೀವೆಲ್ಲ ಯಾಕೆ ಅವರನ್ನ ಒಳಗಡೆ ಪ್ರವೇಶ ಮಾಡೋಕ್ ಬಿಟ್ರಿ? ಎಲ್ಲರೂ ಒಟ್ಟಿಗೆ ನಿಂತುಕೊಂಡಿದ್ದಿದ್ರೆ ಅವರೇನು ಮಾಡೋಕಾಗ್ತಿತ್ತು?” “ಏನ್ ಮಾಡೋದಪ್ಪಾ, ಮುಂಡೇವು ದುಡ್ಡು ಅಂದ್ರೆ ಬಾಯಿ ಬಿಡ್ತಾವೆ, ಅದೂ ಅಲ್ದೇ ಅವ್ರೆಲ್ಲ ಎಕರೆಗಟ್ಲೆ ಜಮೀನು ಮಡ್ಗಿರೋರು, ನಂದು ಒಂದು 10 ಕುಂಟೆ ಅದೆ ಅಷ್ಟೆಯಾ, ಊರೆಲ್ಲ ಒಂದಾದ್ರೆ ನಾನ್ ತಾನೆ ಏನ್ ಮಾಡಕ್ಕಾಯ್ತದೆ ಹೇಳು” “ಆದ್ರೂ…. … Continue reading

Posted in ಬದುಕಿನ ಬಂಡಿ, ಸಾಮಾಜಿಕ ಪಿಡುಗು | Leave a comment

ಸಮಸ್ಯೆ-ಅನುಭವ-ಅನುಭಾವ

ನಮ್ಮ ಭಾರತೀಯ ಸಿನೆಮಾಗಳೇ ಹಾಗೇ, ಹಿನ್ನೆಲೆಯಲ್ಲಿ Theme music ಇಲ್ಲದೆ ನಾಯಕನನ್ನ ತೆರೆಯ ಮೇಲೆ ಪರಿಚಯಸದಿದ್ದಲ್ಲಿ ‘ಇವನ್ಯಾವ ಸೀಮೆ ಹೀರೋ ಗುರೂ’ ಅಂತ ಮೂಗು ಮುರಿಯುವಷ್ಟು ಬೇಡವಾಗಿಬಿಡುತ್ತಾನೆ.  ನಾಯಕನು ಪುಂಡರ ಕೂಟವನ್ನು ಹೊಕ್ಕಾಗ, ದುಷ್ಟರನ್ನು ಸದೆಬಡಿಯುತ್ತಿರುವಾಗ, ಅಪಾಯದ ಸುಳಿಯಲ್ಲಿ ಸಿಲುಕುವಾಗ, ಸುಳಿಯಿಂದ ಹೊರಬರುತ್ತಿರುವಾಗ ಹೀಗೆ ಹಲವಾರು ಸನ್ನಿವೇಶಗಳಲ್ಲಿ ಅದು ಪ್ರೇಕ್ಷಕರನ್ನು ತಕ್ಕ ಮಟ್ಟಿಗೆ ಪ್ರೇರೇಪಿಸಿ ಮುಂಬರುವ … Continue reading

Posted in ಬದುಕಿನ ಬಂಡಿ | Leave a comment

IT ಹಾಡು-ಪಾಡು

ಅಂದೊಂದು ದಿನ ನಾನು ಕಪಾಟಿನ (cupboard) ಬಾಗಿಲು ತೆಗೆಯೋದಕ್ಕೂ, ಅದರ ಒಳಗೆ ನಡೀತಾಯಿದ್ದ ಸಂಭಾಷಣೆಯ ಈ ತುಣುಕು ಕೇಳೋದಕ್ಕೂ ಒಂದೇ ಆಯ್ತು ನೋಡಿ! “…ಬನ್ನಿ ಬನ್ನಿ, ಯಾವಾಗ್ ನೋಡುದ್ರೂ ಐ.ಟಿ ಉದ್ಯೋಗಿಗಳ ಥರ ಬರೀ ನಿಮ್ಮದೇ ಗುಂಗಿನಲ್ಲಿ ಇರ್ತೀರಿ, ವಾಸ್ತವಕ್ಕೆ ಬನ್ರೋ ಕಾರ್ಯಕ್ರಮ ಆರಂಭ ಮಾಡೋಣ” ಎಲಾ ಇವನಾ, ನಮ್ಮ ಬಗ್ಗೆ ಇಷ್ಟು ಅಥಾರಿಟಿಯಿಂದ ಮಾತಾಡೋರು ಯಾರಪ್ಪಾ … Continue reading

Posted in ಬದುಕಿನ ಬಂಡಿ | Leave a comment

ಬದುಕಿನ ನಡುವಿನ ಸಂಬಂಧಗಳು!

ಮೊನ್ನೆ ಊರಿಂದ ಬರ್ತಾ ಯಾವುದೋ ರೇಡಿಯೋನಲ್ಲಿ ಸಂಬಂಧಗಳ ಬಗ್ಗೆ ಏನೋ ಚರ್ಚೆ ಕೇಳಿಕೊಂಡು ಬರ್ತಾ ಇದ್ದೆ, ಆ ಕಾರ್ಯಕ್ರಮದಲ್ಲಿ ಮಾತನಾಡಿದೋರೆಲ್ಲ, ಅಕ್ಕ, ತಂಗಿ, ಅಣ್ಣ, ತಮ್ಮ, ಗರ್ಲ್ ಫ್ರೆಂಡ್, ಬಾಯ್ ಪ್ರೆಂಡ್, ಗಂಡ-ಹೆಂಡತಿ, ಮದುವೆ, ವಿಚ್ಛೇದನ ಅಂತ ಏನೇನೋ ಹೇಳಿಕೊಂಡು ಬರುತ್ತಿದ್ದರು, ಇವನ್ನೆಲ್ಲ ಕೇಳಿಕೊಂಡ ನನ್ನ ಮನಸ್ಸಿನಲ್ಲಿ ಹಲವಾರು ಆಲೋಚನೆಗಳು, ಎಂದಿನಂತೆ ಅಲೆಯೊಡೆಯೋಕೆ ಶುರುವಾಯ್ತು – ಈ … Continue reading

Posted in ಬದುಕಿನ ಬಂಡಿ | Leave a comment

ರಾಜ ಯೋಗ!

“Dude, Shall we go?” ಸಹೋದ್ಯೋಗಿಯೊಬ್ಬ ಪ್ರತಿ 2 ಘಂಟೆಗೊಂದು ಬಾರಿ ನನ್ನನ್ನು ಕೆಲಸದ ಗುಂಗಿನಿಂದ ಎಚ್ಚರಿಸೋದು ಹೀಗೆ. ಈ ಐ ಟಿ ಉದ್ಯೋಗಿಗಳು ಕೆಲ್ಸ ಮಾಡಿ ದಬಾಕೋದು ಅಷ್ಟರಲ್ಲೇ ಇದ್ದರೂ, ವಿರಾಮ ಮಾತ್ರ ಎಗ್ಗಿಲ್ದೆ ತಗೋತಾರೆ. ಹೀಗೊಂದು ವಿರಾಮಕ್ಕೆ ಸಾಕ್ಷಿ ನಮ್ಮ ಮಾಮೂಲಿ ಅಡ್ಡಾ , ಮುಖ್ಯ ದ್ವಾರದ ಬಳಿ ಇರೋ ಟೀ ಅಂಗಡಿ. … Continue reading

Posted in ಬದುಕಿನ ಬಂಡಿ | 1 Comment