ವಾರ್ಷಿಕ ಪ್ರವಾಸ

ನಮ್ಮ ಶಾಲಾ ದಿನಗಳ ನೆನಪಿನ ಪುಸ್ತಕದಲ್ಲಿ ವಾರ್ಷಿಕ ಪ್ರವಾಸವೂ (Annual Trip)  ಒಂದು. ವರ್ಷದ ಮಧ್ಯದಲ್ಲಿ ಬರುವ ಆ ಎರಡು ಮೂರು ದಿನಗಳಿಗೆ ವರ್ಷವಿಡೀ ಕಾದು ಹಣ್ಣಾದದ್ದು ಇನ್ನೂ ನೆನಪಿದೆ. ಅಜ್ಜಿ ತಾತರಿಂದ ಹಿಡಿದು ಮನೆಯವರನ್ನೆಲ್ಲ ಒಪ್ಪಿಸುತ್ತಿದ್ದದ್ದು ಮಹಾ ಸಾಧನೆಯೇ ಸರಿ. ಅಷ್ಟೆಲ್ಲ ಸಾಲದೇ ಗೆಳೆಯರ ಮನೆಯವರನ್ನೂ ಒಪ್ಪಿಸಿ ಅವರ ಅನಾವಶ್ಯಕ ಜವಾಬ್ದಾರಿ ಬೇರೆ, ಬೆನ್ನ ಮೇಲಿನ ಹೊರೆಯಂತೆ. ಕೊನೆಗೆ ಹೊರಡುವ ಹಿಂದಿನ ದಿನದ ತಯಾರಿ. ಅಮ್ಮ ಮಾಡಿಕೊಡುತ್ತಿದ್ದ ಚಕ್ಕುಲಿ ರವೆ ಉಂಡೆಗಳು. ಅಜ್ಜಿ, ತಾತನ ಕಣ್ಣು ತಪ್ಪಿಸಿ ಬಚ್ಚಿಟ್ಟು ಕೊಡುತ್ತಿದ್ದ 50 ರೂಪಾಯಿಯ ಹಳೆಯ ನೋಟು. ಅಪ್ಪ ಗಣಪತಿ ಬೇಕರಿಯಿಂದ ತಂದ ರಾಶಿ ತಿಂಡಿಗಳು. ಇದರ ನಡುವೆ ಆ ರಾತ್ರಿಯು ನಿದ್ದೆಯೇ ಬರುತ್ತಿರಲಿಲ್ಲ. ನಾನು ಶಾಲೆಯಲ್ಲಿದ್ದಾಗ ವಾರ್ಷಿಕ ಪ್ರವಾಸಕ್ಕೆಂದು ಹೆಚ್ಚಾಗಿ ತಲಕಾಡು, ಸೋಮನಾಥಪುರ,ಮೈಸೂರುಗಳಂಥ ಐತಿಹಾಸಿಕ ಹಿನ್ನೆಲೆಯಿರುವ  ಹಲವಾರು ಜಾಗಗಳಿಗೆ ಕರೆದೊಯ್ಯುತ್ತಿದ್ದರು. ಪ್ರವಾಸವೇನೋ ಸರಿ, ಆದರೆ ಮರಳಿ ಬಂದ ನಂತರ ನಮ್ಮ ಟೀಚರ್, ನೋಡಿದ ಜಾಗಗಳ ಬಗ್ಗೆ ಇಪ್ಪತ್ತು ಸಾಲಿನ ಪ್ರಬಂಧ ಬರೆಯಲು ಹೇಳುತ್ತಿದ್ದದ್ದು ನಮಗೆ ತಲೆನೋವು ತರುತ್ತಿದ್ದ ವಿಷಯ. ಹಾಗಾಗಿ ಪ್ರತಿ ಜಾಗಗಳ ಬಗ್ಗೆಯೂ ನೋಟ್ಸ್ ಮಾಡಿಕೊಳ್ಳುತ್ತಿದ್ದೆವು.

ನನಗಿನ್ನೂ ನೆನಪಿದೆ, ಎಂಟನೇ ತರಗತಿಯಲ್ಲಿದ್ದಾಗ ನಾವು ಚಿತ್ರದುರ್ಗ – ಹಂಪೆಗೆ ಪ್ರವಾಸ ಹೋಗಿದ್ದೆವು. ಚಿತ್ರದುರ್ಗದಲ್ಲಿ ಕೋಟೆಯ ಹಿನ್ನೆಲೆ ಮತ್ತು ವಿಶಿಷ್ಟತೆಯನ್ನು ತಿಳಿದುಕೊಳ್ಳಲು ಗೈಡ್ ಒಬ್ಬರನ್ನು ನೇಮಿಸಿದ್ದರು ನಮ್ಮ ಹೆಡ್ ಮಾಸ್ಟರ್. ಆತ ಹೇಳುತ್ತಿದ್ದ ಶೈಲಿಯನ್ನು ಸ್ನೇಹಿತನೊಬ್ಬ ವ್ಯಂಗ ಮಾಡಿದ್ದಕ್ಕೆ, ಆತ ಬಾಯಿಗೆ ಬಂದಂತೆ ಬೈದು ಇತಿಹಾಸದ ಜೊತೆ ತತ್ವ ಪದಗಳನ್ನ ಭೋದಿಸಿದ್ದ. ಅದನ್ನ ನಾನು ನನ್ನ ನೋಟ್ಸ್ನಲ್ಲಿ ಬರೆದಿದ್ದೆ.ಇತ್ತೀಚೆಗೆ ನಾನೊಮ್ಮೆ ಚಿತ್ರದುರ್ಗಕ್ಕೆ ಭೇಟಿ ಇತ್ತಾಗ ಆ ಘಟನೆ ನೆನೆದು ಕಾರಣವಿಲ್ಲದೇ ನಕ್ಕಿದ್ದೆ. ಅಲ್ಲಿ ವಿದೇಶೀಯರ ಜೊತೆ ನಮ್ಮ ಅರೆ ಬರೆ ಇಂಗ್ಲಿಷಿನಲ್ಲಿ ಕಿಚಾಯಿಸಿದ್ದು, ನಮ್ಮ ಪಿ.ಟಿ ಟೀಚರ್ ಕದ್ದು ಸಿಗರೇಟ್ ಸೇದಿದ್ದನ್ನು ನಾವೆಲ್ಲರೂ ಡಿಟೆಕ್ಟಿವ್ಗಳಂತೆ ಕಂಡು ಹಿಡಿದದ್ದು.  ಚೇಷ್ಟೆಗಳು ಹತ್ತಾರು, ನೆನಪುಗಳು ಸಾವಿರಾರು!

ಇಂದು ನಾವು ಕೆಲಸ ಜಂಜಾಟಗಳ ನಡುವೆ ಸಾವಿರಾರು ರುಪಾಯಿ ಖರ್ಚಿಟ್ಟು , ವಿರಾಮದ ಸಲುವಾಗಿ ಪ್ರವಾಸ ಮಾಡಿ, ಒಂದಿಷ್ಟು ಚಿತ್ರಗಳನ್ನ ಫೇಸ್ ಬುಕ್ನಲ್ಲಿ ಸೇರಿಸಿ ಮತ್ತದೇ ವೇಳಾಪಟ್ಟಿಯ ಜೀವನ ಕ್ರಮಕ್ಕೆ ಒಗ್ಗಿಬಿಡುತ್ತೇವೆ. ಸೆಲ್ಪಿ, Instagram , ಫೇಸ್ ಬುಕ್ ಇವ್ಯಾವುಗಳು ಇಲ್ಲದಿದ್ದ ಕಾಲದಲ್ಲೂ ನಾವು ಮಾಡಿದ್ದ ಮುಗ್ಧ ಚೇಷ್ಟೆಗಳು ಅಚ್ಚೊತ್ತಿದ ನೆನಪುಗಳಾಗಿವೆಯೆಂದರೆ ಅದುವೇ ಬಾಲ್ಯದ ಚಮತ್ಕಾರ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s